• ಮಿಲ್ಲುಗಳ ಮುಚ್ಚುವಿಕೆಯಿಂದಾಗಿ ಕಾರ್ಮಿಕರ ಮಕ್ಕಳ ಶಿಕ್ಷಣದ ಮೇಲಾದ ಪ್ರಭಾವ


  ರಾಘವೇಂದ್ರ.ಆರ್, ಡಾ.ಚಂದ್ರಶೇಖರ್


  Designation : ಪಿಹೆಚ್.ಡಿ. ಸಂಶೋಧನಾ ವಿಧ್ಯಾರ್ಥಿ, ಸಮಾಜಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಜ್ಞಾನ ಸಹ್ಯಾದ್ರಿ ಶಂಕರಘಟ್ಟ.


  Journal Name : Reserach maGma
  Abstract :
  ಜಗತ್ತಿನ ಪ್ರತಿಯೊಂದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಸ್ಥಾಪನೆ, ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಕೈಗಾರಿಕೆಗಳ ಮಹತ್ವವನ್ನು ಇನ್ನೊಂದು ರೀತಿಯಲ್ಲಿ ನೋಡಿದರೆ, ನೈಸರ್ಗಿಕವಾಗಿ ದೊರೆಯುವ ಅನೇಕ ಪದಾರ್ಥಗಳನ್ನು ಅದರಲ್ಲೂ ಖನಿಜಗಳು, ಪ್ರಾಣಿಜನ್ಯ ಹಾಗೂ ಕೃಷಿ ಮೂಲದ ಪದಾರ್ಥಗಳನ್ನು ನಿರ್ಮಿಸುವಲ್ಲಿ ಕೈಗಾರಿಕೆಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ. ಇದರಿಂದ ದೊರೆಯುವ ಸಂಪನ್ಮೂಲಗಳನ್ನು ರೂಡಿಸಿಕೊಂಡು ಲಾಭದಾಯಕವಾಗಿ ಬೆಳಸಿಕೊಂಡು ಸಂಪತ್ತನ್ನು ಹೆಚ್ಚಿಸುವುದರ ಮೂಲಕ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಮಾನವ ಬೆಳವಣಿಗೆಗೆ ದುಡಿಮೆ ಬಹಳ ಮುಖ್ಯವಾಗಿದೆ. ಸಮಾಜಕ್ಕೆ ಕಾರ್ಮಿಕರು ಕೇಂದ್ರಿಯ ಅಂಶವಾಗಿದ್ದಾರೆ. ಕೈಗಾರಿಕೆಗಳು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಬದಲಾವಣೆಗೆ ಬಹಳ ಮುಖ್ಯವಾಗಿದೆ. ಇದರಲ್ಲಿ ಕಾರ್ಮಿಕ ಪಾತ್ರ ಪ್ರಮುಖವಾಗಿದೆ. ಇಲ್ಲಿ ವ್ಯವಸ್ಥಿತವಾದ ಚಟುವಟಿಕೆ ಹಾಗೂ ಕಾರ್ಮಿಕ ಸಂಘಟನೆಗಳು ನೇರವಾಗಿ ಅಥವಾ ಗುತ್ತಿಗೆ ಆಧಾರದ ಮೂಲವಾಗಿ ಉತ್ಪಾದನೆಯ ಉದ್ದೇಶ, ಉತ್ಪಾದನಾ ವಸ್ತುಗಳು, ಸೇವೆ, ಮಾನವನ ಬೇಡಿಕೆಗಳು, ಅವಶ್ಯಕತೆಗಳನ್ನು ಈಡೇರಿಸುವುದು ಹೀಗೆ ಮುಂತಾದವುಗಳನ್ನು ಒಳಗೊಂಡಿರುವುದೇ ಕೈಗಾರಿಕೆ ಎನ್ನಬಹುದು. ಮಾನವ ಸಮಾಜದಲ್ಲಿ ದೊರೆಯುವಂತಹ ಕಚ್ಚಾ ವಸ್ತುಗಳನ್ನು ತೆಗೆದುಕೊಂಡು ಸಿದ್ಧ ವಸ್ತುಗಳನ್ನಾಗಿ ಮಾಡಿ ಸಮಾಜಕ್ಕೆ ನೀಡುವುದನ್ನು ನಾವು ಕೈಗಾರಿಕೆ ಎಂದು ಹೇಳಬಹುದು.


  Keywords :
  ಮಿಲ್ಲುಗಳ, ಕಾರ್ಮಿಕರ, ಮೇಲಾದ ಪ್ರಭಾವ


  Reference :
  1. ಪಾಂಡೆ.ಕೆ. ಮಹೇಂದ್ರ, ಕೈಗಾರಿಕಾ ಅಸ್ವಸ್ಥತೆ: ಆದ್ಯತೆಯಿಂದ ಎದುರಿಸಬೇಕಾದ ಸಮಸ್ಯೆ, ಯೋಜನಾ ಆಗಸ್ಟ್ 1991. 2. ಜೋಷಿ.ಸಿ.ಟಿ., ಕರ್ನಾಟಕದಲ್ಲಿ ಕೈಗಾರಿಕಗಳ ಸ್ಥಿತಿಗತಿ ಒಂದು ವಿಶ್ಲೇಷಣೆ ಯೋಜನಾ ನವೆಂಬರ್ 1992. 3. ಗಿರಿಜಾ.ಟಿ., ದಾವಣಗೆರೆ ಇದು ನಮ್ಮ ಜಿಲ್ಲೆ ನಿಹಾರಿಕಾ ಪ್ರಕಾಶನ, ಗದಗ. 4. ಸುಬ್ರಮಣ್ಯ ಜಿ., ಕೈಗಾರಿಕಾ ಸಮಾಜಶಾಸ್ತ್ರ, ಸ್ವಪ್ನಬುಕ್ ಹೌಸ್ ಬೆಂಗಳೂರು, 2002. 5. ಚಂದ್ರಶೇಖರ್.ಟಿ.ಆರ್., ಮಹಿಳೆ: ಆರ್ಥಿಕತೆ ಮತ್ತು ಅಭಿವೃದ್ಧಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 2001.

Creative Commons License
Research maGma is licensed under a Creative Commons Attribution 4.0 International License.