• ಬುಡಕಟ್ಟು ನೃತ್ಯ ಮತ್ತು ಪ್ರದರ್ಶನ ಕಲೆಗಳು


  ಅನುಷ ಎಸ್ .ಇ., ಮತ್ತು ಡಾ.ತಾರಿಹಳಿ ಹನುಮಂತಪ್ಪ


  Designation : ಸಂಶೋಧನಾ ವಿಧ್ಯಾರ್ಥಿ, ಮಾನವಶಾಸ್ತ್ರ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ. ಬಳ್ಳಾರಿ.


  Journal Name : Reserach maGma
  Abstract :
  ನಿಸರ್ಗ ಮತ್ತು ಮನುಷ್ಯನ ನಿರಂತರ ಅನುಸಂಧಾನದ ಫಲವಾಗಿ ತಿಳುವಳಿಕೆ, e್ಞನ ಉತ್ಪನ್ನವಾಗಿದೆ. ಚಾರ್ವಾಕರಾದಿಯಾಗಿ, ಭಾರತದ ಭೌತವಾದಿ e್ಞನಧಾರೆಗಳಲ್ಲಿ ಹಾದು ಹೋದ ಮೀಮಾಂಸಕರೆಲ್ಲ ನಿಸರ್ಗ ಮತ್ತು ಸಮಾಜಗಳ ನಿರಂತರ ಅನುಸಂಧಾನದ ಬೆಳವಣಿಗೆಯನ್ನು ಚರ್ಚಿಸಲೆತ್ನಿಸಿದ್ದಾರೆ. ಮನುಷ್ಯನ ಅಸ್ತಿತ್ವ ಮತ್ತು e್ಞನದ ಉತ್ಪನ್ನದ ಮೂಲ ಧಾತುಗಳ ಕುರಿತ ಈ ಚರ್ಚೆ ಭಾರತೀಯ ದರ್ಶನಗಳಲ್ಲಿ ಅತ್ಯಂತ ತೀವ್ರವಾಗಿ ನಡೆದು ಬಂದಿದೆ. ನಿಸರ್ಗ ಮತ್ತು ಮಾನವನ ನಿರಂತರ ಅನುಸಂಧಾನದ ಫಲವಾಗಿ ಉತ್ಪನ್ನವಾಗುವ ತಿಳುವಳಿಕೆ, ಸೃಷ್ಟಿಯಾಗುವ ಭೌತಿಕ ಪರಿಕರಗಳು ಮತ್ತು ಅವನ ಆಚರಣಾ ವಿಧಾನಗಳ ವಿಕಾಸದ ಕುರಿತು ನಮ್ಮ ದರ್ಶನಗಳಲ್ಲಿ ಆಯಾ ಕಾಲಘಟ್ಟಗಳಲ್ಲಿ ವೈಚಾರಿಕ ಚರ್ಚೆಗಳೇರ್ಪಟ್ಟಿವೆ. ಮನುಷ್ಯ ಮತ್ತು ನಿಸರ್ಗದ ಸಂಬಂಧ ಅದ್ವೈತದ ಸ್ವರೂಪದ್ದು, ದ್ವಂದ್ವಪೂರ್ಣವಾದದ್ದು. ಆದಿವಾಸಿಗಳ ಮತ್ತು ಅರಣ್ಯದ ಸಂಬಂಧವೂ ಇದೇ ಬಗೆಯದು. ದಿಕ್ಕೆಟ್ಟ ಆದಿವಾಸಿ ಸಮುದಾಯಗಳಿಗೆ ಅನ್ನ ಮತ್ತು ಅಸ್ತಿತ್ವದ ಪ್ರಶ್ನೆಯೇ ಮುಖ್ಯವಾದಾಗ ಸಹಜವಾಗಿ ಅವರ ಸಾಂಸ್ಕತಿಕ ಸಂಪತ್ತು ನಶಿಸುತ್ತದೆ.ಅರ್ಥಾತ್ ಅವರ ಜಾನಪದ ಸಾಯುತ್ತದೆ. ಜಾನಪದ ನಿಸ್ತೇಜಗೊಳ್ಳುತ್ತದೆ. ಪ್ರವಾಹದೋಪಾದಿಯಲ್ಲಿ ಬಂದ ಆಧುಕತೆ ಮತ್ತು ಆತ್ಮವೇ ಇಲ್ಲದ ದಿಕ್ಕೆಡಿಸುವ ಅರಣ್ಯಕ್ಕೆ ಸಂಬಂದಿsಸಿದ ಕಾನೂನುಗಳು ಆದಿವಾಸಿಗಳನ್ನು ನಿರಂತರವಾಗಿ ಹಿಂಸಿಸುತ್ತ ಬಂದಿವೆ. ಈ ಸಂಘರ್ಷದಲ್ಲಿ ಎದೆಯುಬ್ಬಿಸಿ ಆತ್ಮಪ್ರತ್ಯಯಕ್ಕಾಗಿ ಹೋರಾಡಿದ ಕೆಲ ಆದಿವಾಸಿ ಸಮುದಾಯಗಳು ನರ್ದಯವಾಗಿ ಹತ್ತಿಕ್ಕಲ್ಪಟ್ಟಿವೆ. ಹೀಗೆ ಹತ್ತಿಕ್ಕಲ್ಪಟ್ಟ ಸಮುದಾಯಗಳು ನಗರಗಳ ಸ್ಲಂಗಳಲ್ಲಿ ಜೀವಿಸುತ್ತಾ ಆತ್ಮನಿಂದನೆ ಮಾಡಿಕೊಳ್ಳುತ್ತಿವೆ. ಕೆಲ ಸಮುದಾಯಗಳು ಹೋರಾಟಗಳನ್ನು ಬಿಟ್ಟುಕೊಡದೆ ರಾಜಕೀಯ ಸಮಂಜಸತೆಯ (Poಟiಣiಛಿಚಿಟ ಛಿoಡಿಡಿeಛಿಣಟಿess) ಪ್ರಶ್ನೆಗಳನ್ನು ಉಗ್ರವಾಗಿ ಮುಖಾಮುಖಿ ಮಾಡುತ್ತಿವೆ. ಒಟ್ಟಾರೆ ಆದಿವಾಸಿಗಳ ಬದುಕು ಇಡೀ ಭಾರತ ಉಪಖಂಡದಲ್ಲಿ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿದೆ. ಆದಿವಾಸಿಗಳ ಅಸ್ತಿತ್ವದ ನಿರಾಕರಣೆ ಎಂಬುದು ಕಾನೂನುಬದ್ಧ ಸಂಸ್ಥೆಗಳಿಂದಲೇ ನಡೆಯುತ್ತಿದೆ.


  Keywords :
  ಬುಡಕಟ್ಟು, ನೃತ್ಯ, ಕಲೆಗಳು


  Reference :
  1. ರಂಗಕಲೆಗಳ ಅಧ್ಯಯನ ಕೇಂದ್ರ. 2. ನಾವಡ. ಎ.ವಿ.,1985. ವೈದ್ಯರ ಹಾಡುಗಳು, ಉಡುಪಿ : ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ. 3. ಜಮೀರುಲ್ಲಾ ಷರೀಪ್, 1988 : ಗೋಂಡರ ಕಾವ್ಯ, ಜಾನಪದ ಗಂಗೋತ್ರಿ(ಡಿಸೆಂಬರ್) ಸಂ: ಎಸ್.ಕೆ. ಕರೀಂಖಾನ್, ಬೆಂಗಳೂರು : ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ. 4. ನಾರಾಯಣ ಯಾಜಿ, 1979. ಶಿರಾಲಿಯ ಗೊಂಡರು ಧಾರವಾಡ : ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ 5. ಸುಶೀಲ. ಪಿ. ಉಪಾಧ್ಯಾಯ, 1989. ಉಡುಪಿ, ಜನಪದ ಆರಾಧನೆ ಮತ್ತು ರಂಗಕಲೆಗಳ ಅಧ್ಯಯನ ಕೇಂದ್ರ.

Creative Commons License
Research maGma is licensed under a Creative Commons Attribution 4.0 International License.